ಶುಕ್ರವಾರ, ಜೂನ್ 6, 2014

ರಾಮ ರಾಜ್ಯದಲ್ಲಿ ಸೀತೆಗೂ ನ್ಯಾಯ ಸಿಗಲಿ - ಮೋದಿ ಯವರಿಗೊಂದು ಬಹಿರಂಗ ಪತ್ರ
'ಮೇ , ನರೇಂದ್ರ ದಾಮೋದರ ಮೋದಿ' ಎಂದು ನಿಮ್ಮ ಕಂಚಿನ ಕಂಠ ದೆಹಲಿಯ ರಾಷ್ಟ್ರ ಪತಿ ಭವನದಲಿ ಮೊಳಗುತ್ತಿದ್ದಂತೆ ,ಕೋಟ್ಯಂತರ ಭಾರತೀಯರ ಕನಸು ನನಸಾಯಿತು . ಅತ್ಯಂತ ನೀಚ , ಅಧೋಗತಿಗಿಲಿದಿರುವ ರಾಜಕೀಯ ಅನೈತಿಕತೆಯ ದಿನಗಳಲ್ಲಿ , ಕೆಸರಿನಿಂದ ಕಮಲದಂತೆ ಉದ್ಭವ ವಾದಂತೆ ತೋರುತ್ತಿತ್ತು . ಈಗಿನ ಅಪ್ರತ್ಯಕ್ಷ ಪರಕೀಯ ರಾಜಕೀಯ ಕಿಂತ , ನೇರ ಪರಕೀಯ ಬ್ರಿಟಿಷ್ ಆಡಳಿತವೇ ಸರಿಯಿತ್ತೇನೋ ಅನ್ನುತ್ತಿರುವಾಗಲೇ , ಭಾರತೀಯರಿಗೆ ಅಶಾಕಿರನವೊಂದು ಗೋಚರಿಸಿದೆ . ಅಧರ್ಮ ತಳ ಮಟ್ಟಕಿಳಿದಾಗ , ಯುಗೇ ಯುಗೇ ಎಂದು ದೇವರು ಹುಟ್ಟುತ್ತನೂ , ಇಲ್ಲವೋ , ಭಾರತೀಯರಿಗೆ ಆಗಾಗ ಸುಭಾಷ್ ಚಂದ್ರ ಭೋಸ್ , ಮೋಹನದಾಸ ಕರಮಚಂದ್ರ ಗಾಂಧಿ ಯಂಥವರು, ವಲ್ಲಭ ಬಾಯಿ ಪಟೇಲ್ ಮತ್ತು ನಿಮ್ಮಂಥವರು ಹುಟ್ಟಿ ಬರುತ್ತಿರುವುದು ಭಾರತೀಯರ ಸೌಭಾಗ್ಯ ಎಂದೇ ಹೇಳಬಹುದು
ಪ್ರಧಾನಿಯಾದ ದಿನದಿಂದ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮತ್ತು ಇಡುತ್ತಿರುವ ದಿಟ್ಟ ಹೆಜ್ಜೆಗಳು ರಾಮ ರಾಜ್ಯದ ವೈಭದ ದಿನಗಳು ಹೆಚ್ಚು ದೂರವಿಲ್ಲ ಎನ್ನಿಸುತ್ತಿದೆ. ಅದು ನನಸಾಗುವ ವರೆಗೂ ಆ ದೇವರು ನಿಮಗೆ ಆಯುಷ್ಯ ಅರೋಗ್ಯ ಮತ್ತು ರಾಜಕೀಯ ಶಕ್ತಿ ಯನ್ನು ನೀಡಲಿ ಎಂಬುದು ನಮ್ಮ ಪ್ರಾರ್ಥನೆ .
ಭಾರತದ ರಾಮರಾಜ್ಯ ಕನಸು ನನಸಾಗುತ್ತಿರುವ ಸಂತೋಷ ಒಂದು ಕಡೆಯಾದರೆ , ರಾಮನ ಕಾಲದಲ್ಲಿ ಸೀತೆಗೆ ಆದ ಅನ್ಯಾಯ ಮರಕಳಿಸುತ್ತಿದೆ ಎಂಬ ದುಃಖ ಒಂದುಕಡೆ . ಆ ರಾಮ ಒಬ್ಬ ಪ್ರಜೆಯನ್ನು ಮೆಚ್ಚಿಸುವುದಕೊಸ್ಕರ , ಯ್ಯಾವ ತಪ್ಪು ಮಾಡಿರದ ಸೀತೆಯನ್ನು ವನವಾಸಕ್ಕೆ ದೂಡಿದನಂತೆ . ರಾಮನನ್ನು ಮನಸಾ ಪೂಜಿಸುವ ರಾಮಭಕ್ತ ರಿಗೂ , ಈ ರಾಮನ ನಿರ್ಧಾರವನ್ನು ಜೀರ್ಣಿಸಿ ಕೊಳ್ಳಲು ಕಷ್ಟ . ಒಬ್ಬ ಅಗಸನ ಉಡಾಫೆ ಮಾತು, ಸೀತೆಯ ಕ್ಷೇಮ ಕಿಂತ ಹೆಚ್ಚಾಯಿತೇ ?. ಒಬ್ಬ ಕ್ಷುಲ್ಲಕ ಪ್ರಜೆಯ ಅಭಿಪ್ರಾಯ ಕ್ಕೆ ರಾಮ ಮನ್ನಣೆ ಕೊಡಲು ರಾಮನಿಗೆ ಮನಸಾದರು ಹೇಗೆ ಬಂತು . ಅದೇಲ್ಲ ವಿಧಿ, ನಿರ್ಧಾರಿತ ವಿಚಾರ ವೆಂದರೂ, ಅಂತಹ ಕಟಿನ ಶಿಕ್ಷೆಗೆ ಸೀತೆ ಮಾಡಿದ ತಪ್ಪಾದರೂ ಏನು ? ಸೀತೆಗೆ ಅನ್ಯಾಯ ವಾಗದೆ ರಾಮ ರಾಜ್ಯ ವನ್ನು ಕಟ್ಟುವುದಕ್ಕೆ ಸಾದ್ಯವೇ ಇಲ್ಲವೇ ಎಂಬುವ ಪ್ರಶ್ನೆ ಕಾಡುತ್ತಿದೆ . ರಾಮರಾಜ್ಯ ಸ್ಥಾಪನೆಗೆ ಸೀತೆಯ ಬಲಿದಾನ ಅವಶ್ಯಕವೇ ?
ಇಷ್ಟು ಪೀಟಿಕೆ ಯೊಂದಿಗೆ ಪ್ರಸ್ತುತ ವಿಚಾರಕ್ಕೆ ಬರುತ್ತೇನೆ . ಇಂದಿನ ಸೀತೆ ಮೋದಿಯವರ ಪತ್ನಿ ಯಶೋದ ಬೆನ್. ನೀವು ದೇಶ ಸೇವೆಗೊಸ್ಕ್ರ ರ ಸಂಸಾರವನ್ನು ಬಿಟ್ಟಿದ್ದು ದೊಡ್ಡ ತ್ಯಾಗವೇ ನಿಜ. ನೀವು ಇದುವರಗಿನ ಪ್ರಯಾಣದಲ್ಲಿ ನಿಮ್ಮ ಪತ್ನಿಯ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿರಲಿಲ್ಲ . ಅದರ ಅವಶ್ಯಕತೆ ದೇಶದ ಜನರಿಗೂ ಇರಲಿಲ್ಲ. ನೀವು ನಿಮ್ಮ ದಾರಿಗೆ ಕಾನೂನಿನ ತೊಡಕು ಬರಬಾರದೆಂದು ಈ ಬಾರಿ ನಿಮ್ಮ ಪತ್ನಿಯ ಹೆಸರನ್ನು ನಮೋದಿಸಿದ್ದಿರ. ಇದರಿಂದ ನಿಮ್ಮ ಮೇಲಿನ ಜನರ ಗೌರವಕ್ಕೆ , ನಿಮ್ಮ ಯಶಸ್ಸಿಗೆ ಅಡ್ಡಿಯಾಗಿಲ್ಲ. ನೀವು ನಿಮ್ಮ ಪತ್ನಿಯ ಹೆಸರನ್ನು ನಮೂದಿಸಿದಾಗ , ಆ ಹಿರಿಯ ಜೀವಕ್ಕೆ ಎಷ್ಟು ಸಂತೋಷ ವಾಗಿತ್ತೋ ಎನೋ ?.
ಲೋಕ ಕಲ್ಯಾಣಕ್ಕೆ ,ನಿಮ್ಮ ಸಂಸಾರ ತ್ಯಾಗವನ್ನು ಗೌತಮ ಬುದ್ದ ನಿಗೆ ಹೊಲಿಸ ಬಹುದೇನೊ . ಸಿದ್ಧಾರ್ಥ ನೂ ಕೂಡ ಸತ್ಯಾನ್ವೇಷಣೆ ಗೋಸ್ಕರ ತನ್ನ ಪತ್ನಿ ಮತ್ತು ಮಗನನ್ನು ಮಧ್ಯರಾತ್ರಿಯ ತೊರೆದನಂತೆ . ಬೋಧಿ ವೃಕ್ಷ ದ ಕೆಳಗೆ ಜ್ಞಾ ನೋ ದಯವಾದ ನಂತರವೂ ಪತ್ನಿಯ ಯನ್ನು ವಿಚಾರಿಸದೆ , ಲೋಕವನ್ನು ಉದ್ಧರಿಸಲು ಹೊರಟು ನಿಂತನಂತೆ . ಪಾಪ ಗೌತಮನ ಪತ್ನಿಯ ಹೆಸರೂ ಯಶೋದ , ನಿಮ್ಮ ಪತ್ನಿಯ ಹೆಸರೂ ಯಶೋದ . ಎಂಥ ಕಾಕಾ ತಾ ಳಿಯ !
ಆ ಹಿರಿಯ ಜೀವ ನೀವು ನಾಮಪತ್ರದಲ್ಲಿ ಅವರ ಹೆಸರನ್ನು ನಮೂದಿಸಿದಾಗ ಎಷ್ಟು ಸಂತೋಷ ಪಟ್ಟಿತ್ತು . ನೀವು ಪ್ರಧಾನಿ ಯಾಗಲಿ ಎಂದು ಎಷ್ಟೂ ದೇವರಿಗೆ ಹರಕೆ ಹೊತ್ತು , ಹಂಪಿ ಹಾದಿಯಾಗಿ , ದೇಶದ ಮೂಲೆ ಮೂಲೆಗೋ ಹೋಗಿ ಕಂಡ ಕಂಡ ದೇವರನ್ನು ಬೇಡಿಕೊಂಡಿದೆ . ಅಂತಹ ಪತಿವ್ರತೆ ಯನ್ನ ನೀವು ಪ್ರಮಾಣ ವಚನಕ್ಕೆ ಆಮತ್ರಿಸಿದ್ದಾರೆ ಎಷ್ಟೂ ಧನ್ಯವಾಗು ತಿದ್ದರೂ ಏನೂ ?. ಭಾರತದ ವೈರಿ ಪಾಕಿಸ್ತಾನದ ನವಾಜ್ ಶರೀಫ ರನ್ನು ಆಮಂತ್ರಿಸಿದ ನಿಮಗೆ, ತಮ್ಮ ಪತ್ನಿಯನ್ನು ಆಮಂತ್ರಿಸುವ ದೊಡ್ಡತನವನ್ನು ತೋರಬಹುದಿತ್ತು . ತಮಿಳರ ವಿರೋಧವನ್ನೂ ಲಕ್ಕಿಸದೆ ಶ್ರೀಲಂಕಾದ ರಾಜಪಕ್ಷೆ ಯಾನ್ನು ಆಹ್ವಾನಿಸಿದ ನೀವು, ನಿಮ್ಮ ಪತ್ನಿಯನ್ನು ಆಹ್ವಾನಿಸಿದ್ದರೆ ಯ್ಯಾರೂ ವಿರೋದಿಸುತ್ತಿರಲಿಲ್ಲ . ಆ ಗೌರವಕ್ಕೆ ಆ ತಾಯಿ ಅರ್ಹಳೂ ಕೂಡ .
ನೀವು ದೇಶಕೊಸ್ಕರ ನಿಮ್ಮ ಸಂಸಾರವನ್ನು ತ್ಯಾಗ ಮಾಡಿದ್ದಿರಿ . ಅದೇ ಕಾರಣಕ್ಕೆ , ನಿಮ್ಮ ದ್ಯೇಯೂ ದ್ದೆಶಗಳಿಗೆ ಅಡ್ಡಿಯಾಗದೆ , ಅವರೂ ಕೂಡ ನೇರವಾಗಿ ಅಲ್ಲದಿದ್ದರೂ, ಅಪ್ರತ್ಯಕ್ಷವಾಗಿ ನಿಮ್ಮ ಗುರಿ ಸಾದನೆಗೆ ನೆರವಾಗಿದ್ದಾರೆ . ಆ ಮಹಾ ತ್ಯಾಗಕ್ಕೆ , ಭಾರತೀಯ ಸ್ತ್ರೀ ಸಂಸ್ಕೃತಿಗೆ , ನೀವು ಅವರ ಕೊಡುಗೆಯನ್ನು ಗುರುತಿಸಿದ್ದರೆ , ಒಂದು ಮಹಾ ಭಾರತೀಯ ನಾರೀ ಗೌರವ ಸಲ್ಲಿಸಿದ ಹಾಗುತ್ತಿತ್ತು. ಆ ಗೌರವಕ್ಕೆ,ಆ ತಾಯಿ ಇನ್ನೂ ಎಷ್ಟುದಿನ ಕಾಯಬೇಕು ಅಥವಾ ಇನ್ನು ಯ್ಯಾವ ತ್ಯಾಗ ಮಾಡಬೇಕು ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ
ಆ ವಿಷಯದ ಬಗ್ಗೆ ಯ್ಯಾವ ಪತ್ರಿಕೆಯವರು ಬರೆಯುವುದಿಲ್ಲ. ಏಕೆಂದರೆ ನಿಮ್ಮ ನ್ನು ಪ್ರಶ್ನೆ ಮಾಡುವ ನೈತಿಕತೆಯನ್ನು ಅವರು ಎಂದೂ ಕಳೆದು ಕೊಂಡಿದ್ದಾರೆ . ನೀವು ಮಾಡದ ತಪ್ಪಿಗೆ, ನಿಮ್ಮನು ಶೊಲಕ್ಕೆರಿಸಲು ಇಲ್ಲ ಸಲ್ಲದ ಅರೂಪಗಳನ್ನು ಹುಟ್ಟು ಹಾಕಿದವೂ , ಅಂದೇ ನಿಮ್ಮನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದು ಕೊಂಡಿದ್ದಾರೆ . ಅವರಿಟ್ಟ ಬೆಂಕಿಯಲ್ಲಿ ,ನೀವು ಅಗ್ನಿ ಪವೇಶ ಮಾಡಿ , ಇನ್ನು ಪ್ರಕಾಶ ಮಾನವಾಗಿ ಬೆಳಗುತ್ತಿರುವುದನ್ನು ಅವರುಗಳಿಗೆ ಅರಗಿಸಿ ಕೊಳ್ಳಲು ಆಗುತ್ತಿಲ್ಲ .
ಇನ್ನು ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುವುದು ದೂರವೇ ಉಳಿಯಿತು . ಏಕೆಂದರೆ ಈ ಹಿರಿಯ ಜೀವವನ್ನು ವಹಿಸಿಕೊಂಡು ಮಾತನಾಡಿದರೆ ಯ್ಯಾವ ಓಟೂ ಗಿಟ್ಟುವುದಿಲ್ಲ . ಗುಂಡೇಟಿಗೆ ಒಬ್ಬ ಭಯೋತ್ಪಾದಕರು ಸತ್ತರೆ , ದೇಶಾದ್ಯಂತ ಬಾಯಿ ಬಡಿದು ಕೊಂಡಾಗ ಸಿಕ್ಕುವ ಓಟ್ ಬ್ಯಾಂಕ್ ಇದರಲ್ಲಿ ಇಲ್ಲ ಎಂದು ಇಲ್ಲರಿಗೆ ತಿಳಿದು ಜಾಣ ಕಿವುಡು /ಕುರುಡು ಪ್ರದಶಿಸುವುದು ಅವರಿಗೆ ಕರಗತ
ಇದು ನಿಮಗೆ ವಯಕ್ತಿಕ ವಿಚಾರ ಎಂದು ತಿಳಿದಿದ್ದರೂ, ನಿಮ್ಮಲಿ ಈ ವಿಚಾರ ಕೋರಿಕೊಳ್ಳುವ ಅಧಿಕಾರ ನಿಮ್ಮ ಅಭಿಮಾನಿಗಳಿಗೆ ಇದೆ ಎಂದುಕೊಂಡಿದ್ದೇವೆ . ರಾಮ ಮಂದಿರ ಕಟ್ಟುವುದು , ಸರ್ಕಾರದ ಜವಾಬ್ದಾರಿ ಅಲ್ಲದಿದ್ದರೂ , ಅದು ಭಾರತೀಯರ ಅಭಿಲಾಷೆ ಎಂದು ವಾಜಪೇಯಿ ಯವರು ಹೇಳಿ ದ ಹಾಗೆ, ನಿಮ್ಮ ಪತ್ನಿಯನ್ನು ನಿಮ್ಮಲ್ಲಿಗೆ ಮರಳುವುದು ಕೂಡ ಅಸಂಖ್ಯಾತ ಅಭಿಮಾನಿಗಳ ಹಾರೈಕೆ ಕೂಡ . ಯ್ಯಾವ ದೇಶಸೇವೆ ಉದ್ದೇಶ ನಿಮ್ಮನ್ನು ಬೇರ್ಪಡಿಸಿತ್ತೋ , ಅದೇ ದೇಶವಾಸಿಗಳ ಆಸೆ ನಿಮ್ಮನ್ನು ಒಂದುಗೂಡಿಸಲಿ
ನಿಮ್ಮನು ಹತ್ತಿರದಿಂದ ಹಿಂಬಾಲಿಸುವ ಅಧಿಕಾರ ನಿಮ್ಮ ಪತ್ನಿಗೆ ಇದೆ. ಆ ಅಧಿಕಾರವನ್ನು ಅವರು ಇದುವರೆಗೂ ಚಲಾಯಿಸಿಲ್ಲ . ಅದು ಅವರ ಬಳಹಿನತೆ ಅಲ್ಲ. ಅದು ಅವರ ದೊಡ್ಡ ಗುಣ . ಭಾರತೀಯ ನಾರಿಯರ ಸಂಸ್ಕೃತಿ . ನಿಮ್ಮ ಅದಿಕೃತ ನಿವಾಸದ ಮೂಲೆ ಯಲ್ಲಿ ಇರುವ ಅವಕಾಶ ಮಾಡಿಕೊಟ್ಟರೆ ಸಾಕು. ಅದರಲ್ಲೇ ಅವರು ಸ್ವರ್ಗವನ್ನು ಕಂಡುಕೊಳ್ಳುತ್ತಾರೆ . ಅವರು ನಿಮ್ಮ ಕೆಲಸಗಳಿಗೆ , ನಿಮ್ಮ ರಾಜಕೀಯ ಚಟುವಟಿಕೆಗಳಿಗೆ ತಲೆ ತೂರಿಸುವತವರಲ್ಲ . ನಿಮ್ಮ ಮೇಲಿನ ಜನರ ಅಭಿಮಾನಕ್ಕೆ ಯ್ಯಾವುದೇ ದಕ್ಕೆ ಬರುವುದಿಲ್ಲ. ಬಾಗಿಲ ಮರೆಯಲ್ಲಿ ನಿಂತು ನಿಮ್ಮ ಯಶಶ್ ಕಣ್ಣು ತುಂಬಿಕೊಂಡು, ಮಾಡಿದ ತ್ಯಾಗ ಸಾರ್ಥಕ ವಾಯಿತು ಎಂದುಕೊಳ್ಳಲಿ . ಈ ವಿಚಾರದಲ್ಲಿ ನಿಮ್ಮ ಉದ್ದೇಶದ ಬಗ್ಗೆಯೂ ವಿರೋಧ ಪಕ್ಷಗಳೂ ಸಂಶಯ ಪಡುವುದಿಲ್ಲ .ಜಯಲಲಿತಾ, ಮಮತಾ ಅವರಿಗೆ ಇರುವಂತೆ , ನಿಮ್ಮ ಪತ್ನಿಯ ಹಿಂದೆ ಒಬ್ಬ ಎಂಪಿ ಅಥವಾ ಎಂ ಎಲ್ ಎ ಗಳು ಇಲ್ಲ. ಆದರೆ ಅವರ ಹಿಂದೆ ಆಸಂಖ್ಯಾತ ಸಜ್ಜನರ ಅನುಕಂಪ ಮತ್ತು ಅವರ ತ್ಯಾಗಕ್ಕೆ ಗೌರವ ಇದೆ
ನೀವು ಗಾಂಧಿ , ನೆಹರು ಮತ್ತು ಪಟೇಲರಂತಹ ನಾಯಕರ ಸಾಲಿನಲ್ಲಿ ನಿಲ್ಲುವಂಥ ದಿನಗಳು ದೂರವಿಲ್ಲ . ಅದರೆ ನೀವು ಗಾಂಧಿ ನೆಹರು ಅವರ ಹತ್ತಿರಕ್ಕಿಂತ , ಪಟೇಲರ ಹತ್ತಿರದಲ್ಲಿ ನಿಲ್ಲುವಿದು ಒಳ್ಳೆಯದು . ದೊಡ್ಡ ಮನುಷ್ಯರ ಪತ್ನಿಯರಾಗುವುದು ದೊಡ್ಡ ಶಾಪ ಎಂದು ಭಾರತೀಯ ಹೆಣ್ಣು ಮಕ್ಕಳು ಭಾವಿಸಬಾರದು . ರಾಮ ,ಗೌತಮ ಬುದ್ದ ಮಾಡಿದ ತಪ್ಪು ಮರುಕಳಿಸದಿರಲಿ . ತ್ಯಾಗದ ಉದ್ದೇಶ ಈಡೇರಿದ ಮೇಲೂ , ತ್ಯಾಗದ ನಿರ್ಧಾರಕ್ಕೆ ಅಂಟಿ ಕೊಳ್ಳುವುದರಲ್ಲಿ ಪುರುಷಾರ್ಥವಿಲ್ಲ . ಅದರಿಂದ ಯ್ಯಾರಿಗೂ ಪ್ರಯೋಜನವಿಲ್ಲ ಕಾಲಾಂತರ ವಾದಾಗ , ಸತ್ತ ಜೀವದ ಮೇಲೆ ವೃತ್ತಾ ಕಾರದ ಹೂಗುಚ್ಚವಿಟ್ಟರೆ , ಸತ್ತವರ ನೋವು ಶೂನ್ಯ ವಾಗುವುದಿಲ್ಲ . ಅವರು ಬದುಕಿರುವಾಗಲೇ ಅವರ ಖ್ರುಣ ವನ್ನು ತೀರಿಸಿಬಿಡಿ . ಖಟಿನ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ನಿಮಗೆ ಕಷ್ಟವೆನೆಲ್ಲ . ದೀಪದ ಕೆಳಗೆ ಕತ್ತಲು ಇರದಿರಲಿ
ನಿಮ್ಮ ಅಭಿಮಾನಿ ಮತ್ತು ಹಿತೈಷಿ

 

ಬುಧವಾರ, ಜುಲೈ 24, 2013

ಸತ್ಯಮೇವ ಜಯತೆ (ಕಾದಂಬರಿ -000)

                                                            This is not work of fiction but friction
                                                            ಸತ್ಯಮೇವ ಜಯತೇ
                                                                          ... ಆದರೆ ಇದು ಸತ್ಯ ಕತೆಯಲ್ಲ


                                                                               ಅರ್ಪಣೆ



ನಮ್ಮ ಮಾತೃಶ್ರೀಯವರಾದ ವಿಜಯಲಕ್ಷ್ಮಿ ಅವರಿಗೆ ಈ ಕಾದಂಬರಿಯನ್ನು ಅರ್ಪಿಸುತ್ತಿದ್ದೇನೆ.



                                                                                     ದಯಾನಂದ ಲಿಂಗೇಗೌಡ, ಅಂಕಣ್ಣನದೊಡ್ಡಿ


ಸತ್ಯಮೇವ ಜಯತೆ (ಕಾದಂಬರಿ -0)

                                                    

                                                            This is not work of fiction but friction
                                                            ಸತ್ಯಮೇವ ಜಯತೇ
                                                                          ... ಆದರೆ ಇದು ಸತ್ಯ ಕತೆಯಲ್ಲ


                                                                 ಲೇಖಕನ ಕೃತಜ್ಞತೆಗಳು



ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾದಂಬರಿ ಮೂಡಿಬರುವುದಕ್ಕೆ ಸಹಕರಿಸಿದ ಸಹೃದಹಿ ಸ್ನೇಹಿತರಾದ ಸೌಮ್ಯ, ಮೋಹನ್ ಮತ್ತು ವಿನುತರವರಿಗೆ, ನನ್ನ ತುಂಬು ಹೃದಯದ ಕೃತಜ್ಞತೆಗಳು. ಇವರುಗಳ ಸಹಾಯದಿಂದ ಬೆಟ್ಟದಂತಹ ಭಾರದ ಕೆಲಸ, ಹೂವಿನಂತೆ ಹಗುರಾಗಿದ್ದು ಮಾತ್ರ ಸುಳ್ಳಲ್ಲ.


ನನ್ನ ಪ್ರತಿಯೊಂದು ಬರಹಗಳನ್ನು ಕೂಲಂಕುಷವಾಗಿ ಓದಿ, ಟೀಕೆ-ಟಿಪ್ಪಣಿಗಳಿಂದ ತಿದ್ದಿ-ತೀಡಿ, ಓದಲು ಅರ್ಹ ಬರಹವಾಗಲು ಪ್ರಯತ್ನಿಸಿದ ನನ್ನ ಹಿತೈಷಿಗಳು ಮತ್ತು ಸ್ನೇಹಿತರಾದ, ಮಕ್ಕಳ ಹೃದಯ ತಜ್ಞ ಡಾ॥ ಕಿರಣ್ ರವರಿಗೆ ನಾನು ಚಿರಋಣಿ. ಯಾವ ಮುಲಾಜಿಗೂ ಸಿಲುಕದ ಅವರ ಹರಿತ ವಿಮರ್ಶೆಯಿಂದ, ಕಾದಂಬರಿಯು ಉತ್ತಮವಾಗಿ ಮೂಡಿಬರಲು ಸಹಾಯ ಮಾಡಿದೆ ಎಂದರೆ ಸುಳ್ಳಲ್ಲ.


                                                                              ದಯಾನಂದ ಲಿಂಗೇಗೌಡ ಅಂಕಣ್ಣನದೊಡ್ಡಿ

ಗುರುವಾರ, ಸೆಪ್ಟೆಂಬರ್ 6, 2012

ಸತ್ಯಮೇವ ಜಯತೆ (ಕಾದಂಬರಿ -6)


                                                              I-ಹೊಳೆ

ಆರು ಮತ್ತು ಏಳನೇ ತರಗತಿಯ ದಿನಗಳು ನನ್ನ ಜೀವನದ ಸಂತೋಷದ ದಿನಗಳು. ವಿದ್ಯಾರ್ಥಿಯ ದಿನಗಳು, ಸುವರ್ಣ ದಿನಗಳು, ಎನ್ನುವ ನಾಣ್ಣುಡಿಯ ಹಾಗೆ.ಮದ್ದೂರು ಸರ್ಕಾರಿ ಶಾಲೆಯಲ್ಲಿ ಎರಡು ವರ್ಷಗಳು, ಎರಡು ದಿನಗಳಂತೆ ಉರುಳಿದ್ದವು. ಐದನೇ ತರಗತಿಯ ಗಾಯಗಳೆಲ್ಲಾ ವಾಸಿಯಾಗಿದ್ದವು.

ನಾನು ಆರನೇ ತರಗತಿಗೆ ಸೇರಿದಾಗ ಅಲ್ಲಿ ಆಗ A B C D ಕಲಿಸುತ್ತಿದ್ದರು. ಅದನ್ನು ನಾನು ನಾಲ್ಕನೇ ಕ್ಲಾಸು ಪಾಸಾದಾಗಲೇ ಕಲಿತಿದ್ದರಿಂದ, ನನ್ನನ್ನು ಇಂಗ್ಲೀಷ್ ಮೇಷ್ಟ್ರು ಬುದ್ಧಿವಂತರ ಸಾಲಿಗೆ ಸೇರಿಸಿದ್ದರು. ಇಂಗ್ಲೀಷ್ ಮೇಷ್ಟ್ರು, ಬೆನ್ನು ತಟ್ಟಿದ ಮೇಲೆ ನನ್ನನ್ನು ಹಿಡಿಯುವವರೇ ಇರಲಿಲ್ಲ. ಸಿಗುವ ಸಮಯದಲ್ಲಿ ಆದಷ್ಟು ಓದಿಕೊಳ್ಳುತ್ತಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ. ಇಂಗ್ಲೀಷ್ ಪಾಠಗಳು ಕನ್ನಡದ ಮೂಲಕವೇ ನಡೆಯುತ್ತಿದ್ದವು. ಬಹಳಷ್ಟು ಹುಡುಗರು ಬಡವರ ಹುಡುಗರೇ ಆಗಿದ್ದರಿಂದ, ನಮ್ಮ ಉಡುಗೆ ತೊಡುಗೆ ಬಗ್ಗೆ ಯಾವ ಮೇಷ್ಟ್ರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಡುಗೆ-ತೊಡುಗೆ ಇರಲಿ, ನಾವು ಹೇಗೆ ಓದುತ್ತಿದ್ದೇವೆ ಎಂದು ಅವರು ಪರೀಕ್ಷಿಸುತ್ತಿರಲಿಲ್ಲ.ತಮಗೆ ತಿಳಿದಿದ್ದನ್ನು ಪಾಠ ಮಾಡಿ ಮುಗಿಸಿ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಓದಿದಷ್ಟು ಓದು, ಆಡಿದಷ್ಟು ಆಟ ಹೀಗೆ ಸಾಗಿತ್ತು. ಅಪರೂಪಕೊಮ್ಮೆ ವಿಶ್ವನನ್ನು ನೋಡಿ ಕಲಿತುಕೊಳ್ಳಿ ಅಂತಲೂ,ಅವನ ಕಾಲಿನ ಕೆಳಗೆ ನುಗ್ಗಿ ಬುದ್ದಿ ಬರುತ್ತೆ ಅಂತಲೂ, ಬೇರೆ ಹುಡುಗರನ್ನು ಬೈದಾಗ ಉತ್ತೇಜಿತನಾಗುತ್ತಿದ್ದೆ.

ಏಳನೇ ತರಗತಿಯ ಪರೀಕ್ಷೆ ಮುಗಿದಿತ್ತು. ಬೇಸಿಗೆ ರಜೆ ಇನ್ನೂ ಕಳೆದಿರಲಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಬಹಳಷ್ಟು ಅಡುಗೆ ಸಾಮಾನುಗಳನ್ನು ಇಟ್ಟುಕೊಂಡು ಅಡುಗೆ ಮಾಡುತ್ತಿದ್ದಳು.ಬಹಳಷ್ಟು ರೀತಿಯ ಗಮಗಮ ಅನ್ನುವ ತಿಂಡಿ ತಿನಿಸುಗಳು ನಾಸಿಕವನ್ನು ಅರಳಿಸುತ್ತಿದ್ದವು. ಯಾವ ಹಬ್ಬಕ್ಕೂ ಅಮ್ಮ ಇಷ್ಟೊಂದು ರೀತಿಯ ಅಡುಗೆ ಮಾಡಿದ್ದನ್ನು ನೋಡಿರಲಿಲ್ಲ.ಅವಳಿಗೆ ಇಷ್ಟು ತರಹದ ಅಡುಗೆ ಮಾಡುವುದಕ್ಕೆ ಬರುತ್ತದೆ ಅಂತ ಗೊತ್ತಾಗಿದ್ದೆ ಅವತ್ತು.


"ಅವ್ವ ಒಂದೇ ಒಂದು ವಡೆ ಕೊಡೆ"
"ಈಗ್ಲೇ ಬೇಡ, ಆಮೇಲೆ ಎಷ್ಟು ಬೇಕಾದರೂ ತಿನ್ನುವೆಯಂತೆ"
"ಆಮೇಲೆ ಅಂದ್ರೆ"
"ರಾಮಣ್ಣನವ್ರು ಊಟ ಮಾಡಿದ ಮೇಲೆ, ಇವತ್ತು ನಮ್ಮ ಮನೆಗೆ ರಾಮಣ್ಣನವ್ರು ಬರ್ತಾ ಇದಾರೆ"
"ರಾಮಣ್ಣ ಅಂದ್ರೆ ಯ್ಯಾರು? ತಿಥಿ ಎಡೆಗೆ ಪೂಜೆ ಮಾಡೋ ಪೂಜಾರಯ್ಯನಾ..? ಇದೆಲ್ಲಾ ಎಡೆ ಪ್ರಸಾದನಾ...?"
"ಥೂ, ಬಿಡ್ತು ಅನ್ನು, ಆ ರಾಮಣ್ಣ ಅಲ್ಲ, ನಮ್ಮ ಶಾಸಕರು. ಓದ್ ಸಲ ಎಲೆಕ್ಷನ್ ನಲ್ಲಿ ಗೆದ್ದಿದ್ರಲ್ಲ ಅವ್ರು"


ಊರಿನಲ್ಲಿ ಓದಿದವರು ಕಡಿಮೆಯೇ, ಬರೆಯಲು ಬಾರದ ಬಹಳ ಜನ. ಅರ್ಜಿ ಬರೆಯಿಸಿಕೊಳ್ಳುವುದಕ್ಕೆ ಅಪ್ಪನ ಬಳಿ ಬರುತ್ತಿದ್ದರು. ಅಪ್ಪ ಅರ್ಜಿ ಬರೆದು ಕೊಡುವುದಷ್ಟೆ ಅಲ್ಲದೇ,ಅಲ್ಪ-ಸ್ವಲ್ಪ ಸರ್ಕಾರಿ ರೀತಿ ನಿಯಮಗಳ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಸರ್ಕಾರಿ ಕೆಲಸವಿದ್ದಲ್ಲಿ ಕೆಲವೊಂದು ಸಲ ಜೊತೆಗೂಡಿ ಮಾಡಿಸುತ್ತಿದ್ದರು. ಅಲ್ಲದೇ ಅಪ್ಪನ ರಾಜಕೀಯ ಜ್ಞಾನ, ಊರ ಜನರಲ್ಲಿ ಗೌರವ ಭಾವನೆ ಮೂಡಿಸಿದ್ದವು. ಒಟ್ಟಿನಲ್ಲಿ ಅಪ್ಪನ ಮಾತು ಊರಿನಲ್ಲಿ ನಡೆಯುತ್ತಿತ್ತು. ಹೀಗಾಗಿ ಚುನಾವಣಾ ದಿನಗಳಲ್ಲಿ ಮನೆಯಲ್ಲಿ ಬಿರುಸಿನ ಚಟುವಟಿಕೆ ಇರುತ್ತಿತ್ತು.


"ರಾಮಣ್ಣನವ್ರು ಬರಬೇಕು ಬಡವರ ಮನೆಗೆ. ಕುಚೇಲನ ಮನೆಗೆ ಕೃಷ್ಣ ಬಂದಹಾಗೆ ಆಯ್ತು ನೋಡಿ"
"ಸ್ವಲ್ಪ ಬದಲಾವಣೆ ಇದೆ, ಆ ಕೃಷ್ಣ ಕುಚೇಲನಿಗೆ ಸಹಾಯ ಮಾಡಲು ಮನೆಗೆ ಬಂದ್ರೆ, ಈ ರಾಮಣ್ಣ ನಿಮ್ಮ ಸಹಾಯ ಯಾಚಿಸಿ ಬಂದಿದ್ದಾನೆ"
"ಅದಿರ್ಲಿ ಬನ್ನಿ, ಕೈ ಕಾಲು ತೊಳೆದುಕೊಳ್ಳಿ, ಊಟ ಮಾಡುತ್ತ ಮಾತಾಡೋಣ"

ಶಾಸಕರು ಮತ್ತು ಅವರ ಕಡೆಯವರು ಊಟ ಮಾಡುತ್ತ ಕುಳಿತಿದ್ದರು. ನಾನು ಯಾವಾಗ ಇವರ ಊಟ ಮುಗಿಯುತ್ತದೆ ಅಂತ ಕಾಯುತ್ತಾ ಅಲ್ಲೇ ನಿಂತಿದ್ದೆ.


"ಬಡವರ ಮನೆ ಊಟ ಚಂದ, ಸಿರಿವಂತರ ಮನೆ ಮಾತು ಚಂದ ಅಂತ ಯ್ಯಾಕೆ ಅಂತಾರೆ ಅಂತ ಇವತ್ತು ಗೊತ್ತಾಯ್ತು ನೋಡಿ ಅಕ್ಕಾವ್ರೆ. ಇಂಥಾ ಊಟ ಬೆಂಗಳೂರಿನಲ್ಲೂ ಸಿಗೊದಿಲ್ಲ ನೋಡಿ"

"ನೀವು ನಮ್ಮ ಮನೆಗೆ ಬರುತ್ತಿರುವುದು ಇದೇ ಮೊದಲ ಸಲ, ನಮ್ಮೂರಿನ ಶಾಸಕರಿಗೆ, ನಾವು ದಿನಾ ತಿನ್ನೋ ಗೊದ್ಡು ಸಾರು ತಿನ್ನಿಸಿ ಕಳಿಸುವುದಕ್ಕೆ ಆಗ್ತದೆಯಾ ?"

"ಇನ್ಮುಂದೆ, ಈ ಊರಿಗೆ ಬಂದರೆ ನಿಮ್ಮ ಮನೆಯಲ್ಲೇ ಊಟ ನೋಡಿ. ಮನೆ ಯಜಮಾನರು ಒಪ್ಪಿದ್ರೆ.ಏನಂತೀರಿ ಮನೆಯ ಯಜಮಾನರು "
"ಎಂಥಾ ಮಾತು, ನೀವು ಬರೋದು ಹೆಚ್ಚೋ, ನಾವು ಬಡಿಸೋದು ಹೆಚ್ಚೋ"
"ಕಳೆದ ಎಲೆಕ್ಷನ್ ನಲ್ಲಿ ನೀವು ನಮಗೆ ಹೆಚ್ಚಿನ ಸಹಾಯ ಮಾಡಲಿಲ್ಲ. ಈ ಸಲ ಆದ್ರೂ ಪೂರ್ಣ ಮನಸ್ಸಿನಿಂದ ಸಹಾಯ ಮಾಡಬೇಕು"
"ರಾಮಣ್ಣೋರೆ, ನಮಗೆ ಈ ಪಕ್ಷ, ಆ ಪಕ್ಷ ಅಂತ ಇಲ್ಲ. ನಮ್ಮ ಊರಿಗೆ ಉಪಕಾರ ಮಾಡೋರು ಯ್ಯಾರದ್ರೂ ಪರವಾಗಿಲ್ಲ ಓಟಾಕ್ತಿವಿ"
"ಈ ಊರಿಗೆ ಕುಡಿಯೋಕೆ ನೀರಿನ ಟ್ಯಾಂಕ್ ಕಟ್ಟಿಸಿದ್ದು ನಮ್ಮ ಪಕ್ಷದವರೆ ಅಲ್ವ. ನಮ್ಮ ಸರ್ಕಾರ ಕರೆಂಟ್ ಕೊಟ್ಟಿದೆ, ಸ್ಕೂಲು ಕೊಟ್ಟಿದೆ, ವಿಧವೆಯರಿಗೆ ಮಾಸಾಶನ ಕೊಡ್ತಾ ಇಲ್ವ.ನಿಮಗೆ ಏನಾದ್ರು ಬೇಕಿದ್ರೆ ಅರ್ಜಿ ಕೊಡಿ, ಸರ್ಕಾರದಿಂದ ಕೊಡ್ಸೊಣ"

"ನಮ್ಮೂರಿಗೆ ಒಂದು ಬಸ್ಸು ಬೇಕು ನೋಡಿ. ಇದನ್ನು ಎಲ್ಲಾ ಶಾಸಕರಿಗೂ ಕೇಳ್ತಾ ಬಂದಿದ್ದೇವೆ. ಇನ್ನೂ ಆ ಕಾಲ ಬಂದಿಲ್ಲ"

"ನಿಮ್ಮ ಯಜಮಾನರು ಬಹಳ ಬುದ್ಧಿವಂತರು ಕಣಮ್ಮ, ಇವರ ಮಾತು ನೋಡಿದ್ರೆ ನಮ್ಮ ಅಜ್ಜಿ ಹೇಳಿದ್ದ ಕತೆ ಜ್ಞಾಪಕ ಬರ್ತಿದೆ, ಹೇಳ್ತಿನಿ ಕೇಳಿ. ಒಂದೂರಿನಲ್ಲಿ ಒಂದು ಬಡ ಸಂಸಾರ ಇತ್ತಂತೆ, ಅದರಲ್ಲಿ ಗಂಡ, ಹೆಂಡತಿ ಮತ್ತು ಅತ್ತೆ ಇದ್ದರಂತೆ. ಆ ಗಂಡ-ಹೆಂಡತಿಗೆ ಮಕ್ಕಳಾಗಿರಲಿಲ್ಲವಂತೆ.ಕಡು ಬಡತನ ಬೇರೆ, ಗಂಡನಿಗೆ ಚೆನ್ನಾಗಿ ಹಣ ಸಂಪಾದಿಸಿ ಮನೆ ಕಟ್ಟಬೇಕು ಅಂತ ಆಸೆ. ಹೆಂಡತಿಗೆ ಚಿನ್ನದ ಮೇಲಿನ ಆಸೆ. ಅಜ್ಜಿಗೆ ಮೊಮ್ಮಕ್ಕಳು ಬೇಕು ಅಂತ ಆಸೆ.ಸರಿ ಒಂದು ದಿನ ಅವರೆಲ್ಲಾ ಕುಳಿತು ಬೇಡಿಕೊಂಡರಂತೆ. ತಕ್ಷಣ ದೇವ್ರು ಪ್ರತ್ಯಕ್ಷ ಆಗಿ ನಿಮಗೆ ಒಂದೇ ಒಂದು ವರ ಕೊಡುತ್ತೇನೆ ಬೇಡಿಕೊಳ್ಳಿ ಅಂತ ಹೇಳಿದನಂತೆ.ಅಜ್ಜಿ ಯೋಚನೆ ಮಾಡಿ ಹೇಳಿದರಂತೆ, ನನಗೆ ನ್ನ ಮೊಮ್ಮಗ ಅರಮನೆಯಂತಹ ನಮ್ಮ ಮನೆಯಲ್ಲಿ ಕೂತುಕೊಂಡು, ಚಿನ್ನದ ತಟ್ಟೆಯಲ್ಲಿ ಊಟ ಮಾಡುವುದನ್ನು ನೋಡಬೇಕು ಅಂತ ಆಸೆ,ಅಂತ ಬೇಡಿಕೊಂಡರಂತೆ. ಅಂದ್ರೆ ಅವರ ಮೊಮ್ಮಗನೂ ಬಂದ ಹಾಗೆ ಆಯ್ತು, ಅರಮನೆಯಂತಹ ಮನೆನೂ ಬೇಡಿದ ಹಾಗೆ ಆಯ್ತು, ಚಿನ್ನದ ತಟ್ಟೆನೂ ಸಿಕ್ಕ ಹಾಗೆ ಆಯ್ತು.ಅದೇ ರೀತಿ ನಿಮ್ಮ ಯಜಮಾನರು ಹೊಳೆಗೆ ಸೇತುವೆ ಬೇಕು ಅಂತ ಕೇಳದೆ, ಬಸ್ಸು ಬೇಕು ಅಂತ ಕೇಳಿದರು. ಬಸ್ಸು ಬಿಡಬೇಕಾದರೆ ಸೇತುವೆಯನ್ನು ಕಟ್ಟಲೇಬೇಕಲ್ಲಾ ಹ್ಹ... ಹ್ಹ...."

"ನೀವು ಏನೇ ಹೇಳಿ, ಈ ಹೊಳೆಯಿಂದ ನಮ್ಮೂರು ದ್ವೀಪದ ತರಹ ಆಗಿಬಿಟ್ಟಿದೆ. ಸೇತುವೆ ಇಲ್ಲದೆ ಬಸ್ಸು ಇಲ್ಲಾ. ಗಾಡಿಯಲ್ಲಿ ಕಬ್ಬು ತುಂಬಿ ಹೊಳೆಯನ್ನು ದಾಟಿಸುವುದು ಎಷ್ಟು ಕಷ್ಟ ಅಂತೀರಿ.ಹೆಂಗಸರು, ಮಕ್ಕಳು ಬೇರೆ ಊರಿಗೆ ಹೊಗಬೇಕಾದರೆ ಮೊದಲು ಹೊಳೆಯಲ್ಲಿ ಎಷ್ಟು ನೀರಿದೆ ಅಂತ ಯೋಚನೆ ಮಾಡಿ ಹೊರಡುತ್ತಾರೆ. ನಮ್ಮೂರಿನಲ್ಲಿ ಮದುವೆ ಸಂಬಂಧಗಳನ್ನು ಬೆಳೆಸೊದು ಬಹಳ ಕಷ್ಟ ಆಗಿಬಿಟ್ಟಿದೆ. ಬಸ್ಸಿಲ್ಲದ ಊರಿಗೆ ಯಾರು ಹೆಣ್ಣು ಕೊಡುತ್ತಾರೆ ಹೇಳಿ. ಒಂದಾ..... ಎರಡಾ............ ಈ ಹೊಳೆಯಿಂದ ನಮಗೆ ಎಷ್ಟು ಉಪಕಾರ ಆಗಿದೆಯೋ, ಅಷ್ಟೆ ಕಷ್ಟನೂ ಆಗಿದೆ"

"ಒಂದು ಸೇತುವೆ ಅಂದ್ರೆ, ಕೋಟಿಗಟ್ಟಲೆ ಟೆಂಡರಿನ ಮಾತು. ಒಂದೇ ಊರಿಗೆ ಕೋಟಿಗಟ್ಟಲೆ ಹಣ ಸುರಿಯುವುದಕ್ಕೆ ಸರ್ಕಾರದವರು ಒಪ್ಪುವುದಿಲ್ಲ. ಸಾವಿರಾರು ಬಸ್ಸು, ಲಾರಿ ಒಡಾಡ್ತ ಇದ್ರೆ,ಈ ಕೆಲಸಕ್ಕೆ ಸರ್ಕಾರ ತಕ್ಷಣ ಹಣ ಮಂಜೂರು ಮಾಡ್ತದೆ. ಇಲ್ಲಿ ಎಷ್ಟು ವಾಹನ ಓಡಾಡುತ್ತವೆ ಹೇಳಿ. ಒಂದು ಊರಿನ ಜನ ಓಡಾಡುವುದಕ್ಕೆ ಕೋಟಿಗಟ್ಟಲೆ ಬೆಲೆಬಾಳುವ ಸೇತುವೆ ಕಟ್ಟಿಸುವುದು,ತೆರಿಗೆ ಕೊಟ್ಟ ಹಣ ವ್ಯರ್ಥ ಮಾಡ್ದ ಹಾಗೆ ಅಲ್ವೆ...?"

"ನೀವು ಹಣ ಹಾಕಿ, ಹಣ ತೆಗೆಯೋ ವ್ಯಾಪಾರಸ್ಥರ ತರಹ ಮಾತಾಡ್ತ ಇದ್ದೀರಾ. ಜನಕ್ಕೆ ಉಪಯೋಗ ಆಗೋದಿದ್ರೆ, ಸರ್ಕಾರ ಲಾಭ ನಷ್ಟ ನೋಡಬಾರದು.ನಮ್ಮೂರು ಇಷ್ಟು ಹಿಂದೆ ಉಳಿಯುವುದಕ್ಕೆ ಸಂಪರ್ಕ ಇಲ್ಲದೇ ಇರೋದೆ ಕಾರಣ. ಮಕ್ಕಳು ಸ್ಕೂಲಿಗೆ ಹೋಗುವುದಕ್ಕೆ ಆಗಲ್ಲ, ಹೆಂಗಸರು ಹೊಳೆದಾಟುವುದು ಕಷ್ಟ. ಬೆಳೆದ ಫಸಲು ದಾಟಿಸುವುದು ಕಷ್ಟ.ಈ ಊರಿನಲ್ಲಿ ಮನೆ ಕಟ್ಟೋಕೆ ಎಷ್ಟು ಕಷ್ಟ ಅಂತೀರಿ. ಮನೆ ಕಟ್ಟುವ ಸಾಮಾನನ್ನು ಮದ್ದೂರಿನಿಂದ ಹೇಗೆ ಈ ಕಡೆ ಸಾಗಿಸುವುದು ನೀವೆ ಹೇಳಿ"

"ಸ್ಕೂಲು ಅಂದಾಗ ಜ್ಞಾಪಕ ಬಂತು ನೋಡಿ. ಕಾನ್ವೆಂಟ್ ನವರು ನಿಮ್ಮ ಹುಡುಗನಿಗೆ ಟಿ.ಸಿ ಕೊಟ್ಟು ಕಳಿಸಿದರಂತೆ. ಆಗ ನೀವು ನನಗೆ ಒಂದು ಮಾತು ಹೇಳಿದ್ರೆ ಅವರ ಗ್ರಹಚಾರ ಬಿಡಿಸ್ತಿದ್ದೆ"

"ಇರ್ಲಿ ಬಿಡಿ, ಅವರು ಹೇಳುವುದಲ್ಲೂ ನ್ಯಾಯ ಇದೆ. ನಮ್ಮ ಮಗನೂ ಅವರ ಶಾಲೆಗೆ ತಕ್ಕಂತೆ ಓದುತ್ತಿರಲಿಲ್ಲ"

"ನಿಮಗೆ ಗೊತ್ತಾಗಲ್ಲ ಬಿಡಿ. ಇದು ಹೊಸದೇನಲ್ಲ. ಯಾರಾದರೂ ಅವರಿಗೆ ಬೇಕಾದವರನ್ನು ಸೇರಿಸಿಕೊಳ್ಳುವುದಕ್ಕೆ ಇಂತಹದೆಲ್ಲಾ ನಾಟಕ ಮಾಡ್ತಾ ಇರ್ತಾರೆ. ಚನ್ನಾಗಿ ಓದಲ್ಲ ಅಂತ ಯಾರಿಗಾದರೂ ಟಿ.ಸಿ ಕೊಟ್ಟು ಕಳಿಸುವುದು, ತಮಗೆ ಬೇಕಾದವರನ್ನು ಆ ಜಾಗಕ್ಕೆ ಸೇರಿಸಿಕೊಳ್ಳುವುದು. ಅದನ್ನು ಅವ್ರು ನೇರವಾಗಿ ಮಾಡುವುದಿಲ್ಲ.ಚೆನ್ನಾಗಿ ಓದೋ ಹುಡುಗರನ್ನು ತೆಗೆದುಕೊಂಡು ಓದಿಸೋಕೆ ಅವ್ರೇ ಯ್ಯಾಕೆ ಬೇಕು. ಅವ್ರು ನಿಜವಾದ ಕಸುಬುದಾರರಾಗಿದ್ರೆ ನಿಮ್ಮ ಮಗನಂತಹ ಹುಡುಗರನ್ನು ತೆಗೆದುಕೊಂಡು ಬೆಳೆಸಬೇಕು.ಚನ್ನಾಗಿ ಓದೋರು ಎಲ್ಲಿದ್ರೂ ಓದ್ತಾರೆ. ಒಳ್ಳೆ ಸ್ಕೂಲು ಬೇಕಾಗಿರೋದು ಸುಮಾರಾಗಿರೋ ಹುಡುಗರಿಗೆ"

"ಬೇರೆ ಯ್ಯಾರನ್ನೊ ಸೇರಿಸಿಕೊಳ್ಳುವುದಕ್ಕೆ ನಮಗೆ ಟಿ.ಸಿ ಕೊಡೋ ವಿಷಯ ನನಗೆ ಗೊತ್ತಿರಲಿಲ್ಲ. ನಮ್ಮ ವಿಶ್ವ ಅವರ ಸ್ಕೂಲಿಗೆ ಹೊಂದಿಕೆ ಆಗಲ್ಲ ಅಂತ ಹೇಳಿ ಬಿಡಿಸಿದ್ರು"

"ಅವ್ರು ಕೊಟ್ರು, ನೀವು ಒಂದು ಮಾತನಾಡದೆ ಟಿ.ಸಿ ಇಸ್ಕೊಂಡು ಬಂದ್ರಿ. ನಿಮ್ಮಂತಹ ಒಳ್ಳೆ ಜನಕ್ಕೆ ಈ ಕಾಲದಲ್ಲಿ ಬೆಲೆ ಇಲ್ಲ. ಇರ್ಲಿ ಬಿಡಿ, ಈಗ ಏನು ಓದುತ್ತಾ ಇದಾನೆ"

"ಏಳು ಮುಗೀತು"

"ಒಳ್ಳೆ ಸಮಯಕ್ಕೆ ನಾನು ನಿಮ್ಮ ಮನೆಗೆ ಬಂದಿದ್ದೀನಿ. ಹೈಸ್ಕೂಲಿಗೆ ನಿಮ್ಮ ಹುಡುಗನಿಗೆ ಇಂಗ್ಲೀಷ್ ಮೀಡಿಯಂ ನಲ್ಲಿ ಸೀಟು ಕೊಡಿಸೋ ಜವಬ್ದಾರಿ ನಂದು. ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೆ ನಿಮ್ಮ ಮಗನ ಜೀವನವೇ ಬದಲಾಗುತ್ತೆ ನೋಡಿ ಯೋಚಿಸಿ"

"ನಮ್ಮ ಹುಡುಗನ್ನು ಒಂದು ಮಾತು ಕೇಳ್ತಿನಿ"

"ಸಣ್ಣ ಮಕ್ಕಳಿಗೆ ಏನು ಗೊತ್ತಾಗುತ್ತೆ. ಬಹಳ ಊರಿನ ನೀರು ಕುಡಿದೋರು ನಾವು, ನಾವು ಅವರಿಗೆ ಮಾರ್ಗದರ್ಶನ ಮಾಡಿ ಬೆಳೆಸಬೇಕು. ಎಲ್ಲದಕ್ಕೂ ಮಕ್ಕಳನ್ನು ಕೇಳಿ ಮಾಡುವುದಕ್ಕೆ ಆಗುವುದಿಲ್ಲ.ಅವರಿಗೆ ನಿರ್ಧಾರ ತಕ್ಕೊಳ್ಳೊ ಅನುಭವ ಇರುತಾ ಹೇಳಿ"

"ನೀವು ಹೇಳಿದ್ದು ಸರಿ ಬಿಡಿ"

"ಮತ್ತೆ ಈಗ ಎಲೆಕ್ಷನ್ ನಲ್ಲಿ ನಿಮ್ಮ ಊರಿನ ಓಟು ನಮಗೆ ಬೀಳೋ ಹಾಗೆ ನೋಡ್ಕೊ ಬೇಕು. ನೀವು ಬೆಳೆಯಿರಿ, ನಾವೂ ಬೆಳೆಯೋಣ"

"ಮತ್ತೆ ನಮ್ಮೂರಿಗೆ ಬಸ್ಸು....."

"ಸೇತುವೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಮಾಡೋಣ.ಇಲ್ಲ ಅಂತ ಹೇಳುದ್ನೆ ?ನೋಡಿ ನಾವು ಜನರ ಹಿತದ ಜೊತೆ ,ನಮ್ಮ ಹಿತವನ್ನು ನೋಡ್ಕೊಬೇಕು. ರಾಜಕೀಯ ಭಾಷೆಯಲ್ಲಿ ಹೇಳೂದಾದರೆ,ನೆಹರೂರವರ ತರ ಬದುಕಬೇಕು ,ಗಾಂಧಿಜಿ ಅವರ ಹಾಗೆ ಅಲ್ಲ .ನೋಡಿ ನೆಹರು ದೇಶಾ ದೇಶಾ ಅಂತ ,ಯಾವತ್ತು ಮನೆಯವರನ್ನ ಕಡೆಗಣಿಸಲಿಲ್ಲ.ನೆಹ್ರುರವರ ಮಕ್ಕಳು ,ಮೊಮ್ಮಕ್ಕಳು ಎಲ್ರು ಪ್ರದಾನ ಮಂತ್ರಿಗಳಾದರು .ಗಾಂಧೀಜಿ ಅವ್ರನ್ನ ನೋಡಿ.ಮನೆ ಕಡೆ ಗಮನ ಕೊಡದೆ ಇದ್ದುದ್ಕೆ ಮಕ್ಕಳು ಮೂರು ಮದ್ಯೆ ಮತ್ತೊಂದು ಅನ್ನೋ ಆಗೇ ಬದುಕ್ತಾ ಇದ್ದಾರೆ . ನಿಮ್ಮ ಮಗನಿಗೆ ಇಂಗ್ಲಿಷ್ ಮೀಡಿಯಂನಿಂದ ಜೀವನವೇ ಬದಲಾಗುತ್ತೆ .ನಿಮಗೇ ಗೊತ್ತು ,ಇಂಗ್ಲಿಷ್ ಗೊತ್ತಿದ್ರೆ ,ಅಮೆರಿಕದಲ್ಲೂ ಬೇಕಾದರೂ ಹೋಗಿ ಬದುಕಬಹುದು.ಬರಿ ಕನ್ನಡ ಅಂತಂದ್ರೆ ಬೆಂಗಳೂರಿನಲ್ಲೂ ಕೆಲಸ ಸಿಗೋದು ಕಷ್ಟವೆ............. "

ಅಲ್ಲೇ ನಿಂತಿದ್ದ ನನಗೆ ಎತ್ತಿ ಒಗೆದ ಹಾಗಾಯ್ತು. ಅಪರೂಪಕ್ಕೆ ಅಮ್ಮ ಮಾಡಿದ ಯಾವ ತಿನಿಸುಗಳು ರುಚಿಸಲಿಲ್ಲ.



(ಮುಂದುವರೆಯುವುದು )